Jagaluru Election Results: ಜಗಳೂರು ವಿಧಾನಸಭಾ ಕ್ಷೇತ್ರ ಚನಾವಣೆ 2023 ಫಲಿತಾಂಶ; ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ

Jagalur Assembly Election Results 2023 Live Counting Updates: ಬರಪೀಡಿತ ತಾಲೂಕು ಎಂಬ ಹಣೆಪಟ್ಟಿಕಟ್ಟಿಕೊಂಡಿರುವ ಈ ಕ್ಷೇತ್ರದಿಂದ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ರಾಮಚಂದ್ರಪ್ಪ ಅವರು ಆಯ್ಕೆಯಾಗಿದ್ದರು. ಪ್ರಸಕ್ತ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹೊಸ ಮುಖಕ್ಕೆ ಅವಕಾಶ ಕೊಟ್ಟಿದೆ.

Jagaluru Election Results: ಜಗಳೂರು ವಿಧಾನಸಭಾ ಕ್ಷೇತ್ರ ಚನಾವಣೆ 2023 ಫಲಿತಾಂಶ; ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ
ಜಗಳೂರು ವಿಧಾನಸಭೆ ಚುನಾವಣೆ ಫಲಿತಾಂಶ
Follow us
|

Updated on: May 13, 2023 | 2:42 AM

Jagaluru Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ದಾವಣಗೆರೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದಾಗಿರುವ ಜಗಳೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಸ್​ವಿ ರಾಮಚಂದ್ರಪ್ಪ, ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ದೇವೇಂದ್ರಪ್ಪ, ಜೆಡಿಎಸ್ ಅಭ್ಯರ್ಥಿಯಾಗಿ ದೇವರಾಜ್ ಕಣದಲ್ಲಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಕೂಡ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಹಾಕಿದ್ದು, ಗೋವಿಂದರಾಜು ಕಣದಲ್ಲಿದ್ದಾರೆ.

ಬರಪೀಡಿತ ತಾಲೂಕು ಎಂಬ ಹಣೆಪಟ್ಟಿಕಟ್ಟಿಕೊಂಡಿರುವ ಈ ಕ್ಷೇತ್ರದಿಂದ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ರಾಮಚಂದ್ರಪ್ಪ ಅವರು ಆಯ್ಕೆಯಾಗಿದ್ದರು. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್​ನ ಎಚ್​ಪಿ ರಾಜೇಶ್ 29221 ಮತಗಳ ಅಂತದಲ್ಲಿ ಪರಾಭವಗೊಂಡಿದ್ದರು. ಜೆಡಿಎಸ್ ಈ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿದೆ.

2008ರಿಂದ ರಾಮಚಂದ್ರಪ್ಪ ಹಾಗೂ ರಾಜೇಶ್ ನಡುವೆ ಹಾವು ಏಣಿ ಆಟ ನಡೆಯುತ್ತಿತ್ತು. 2008ರ ಚುನಾವಣೆಯಲ್ಲಿ ರಾಮಚಂದ್ರಪ್ಪ ಅವರು ರಾಜೇಶ್ ವಿರುದ್ಧ ಗೆಲುವು ಸಾಧಿಸಿದ್ದರು. 2013ರ ಚುನಾವಣೆಯಲ್ಲಿ ರಾಜೇಶ್ ಅವರು ರಾಮಚಂದ್ರಪ್ಪ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. 2018ರಲ್ಲಿ ರಾಜೇಶ್ ಅವರು ರಾಮಚಂದ್ರಪ್ಪ ವಿರುದ್ಧ ಪರಾಭವಗೊಂಡಿದ್ದರು, ರಾಮಚಂದ್ರಪ್ಪ ಶಾಸಕರಾಗಿ ಆಯ್ಕೆಯಾಗಿದ್ದರು. 1962ರಿಂದ ಈ ವರೆಗೆ ಕ್ಷೇತ್ರದಲ್ಲಿ ಜೆಡಿಎಸ್ ಒಮ್ಮೆಯೂ ಗೆದ್ದಿಲ್ಲ. ಪಕ್ಷೇತರ ಅಭ್ಯರ್ಥಿಗಳು ಶಾಸಕರಾಗಿದ್ದರು.

2023ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ರಾಮಚಂದ್ರಪ್ಪ ಅವರನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಪಕ್ಷ ರಾಜೇಶ್ ಕೈಬಿಟ್ಟು ದೇವೇಂದ್ರಪ್ಪ ಅವರಿಗೆ ಮಣೆಹಾಕಿದೆ. ರಾಮಚಂದ್ರಪ್ಪ ಅವರು ಕ್ಷೇತ್ರದ ಜನರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದ್ದಾರೆ. ಇತ್ತ ಕಾಂಗ್ರೆಸ್​ನವರು ಜಗಳೂರನ್ನು ಮತ್ತೆ ನಾವು ಗೆದ್ದುಕೊಳ್ಳುತ್ತೇವೆ ಎಂಬ ವಿಶ್ವಾಸದಲ್ಲಿದ್ದಾರೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

ತಾಜಾ ಸುದ್ದಿ
ಬೆಳಗಾವಿಯಲ್ಲಿ ಧಾರಾಕಾರ ಮಳೆಯಿಂದ ಅವಾಂತರ: ಬೆಡ್ ರೂಮ್​ಗೆ ನುಗ್ಗಿದ ನೀರು
ಬೆಳಗಾವಿಯಲ್ಲಿ ಧಾರಾಕಾರ ಮಳೆಯಿಂದ ಅವಾಂತರ: ಬೆಡ್ ರೂಮ್​ಗೆ ನುಗ್ಗಿದ ನೀರು
ಚಿಕ್ಕಮಗಳೂರು: ಮೇವಿಗಾಗಿ ಕಾಡಿನಿಂದ ನಾಡಿಗೆ ಬಂದ ಕಾಡು ಕೋಣಗಳ ಹಿಂಡು
ಚಿಕ್ಕಮಗಳೂರು: ಮೇವಿಗಾಗಿ ಕಾಡಿನಿಂದ ನಾಡಿಗೆ ಬಂದ ಕಾಡು ಕೋಣಗಳ ಹಿಂಡು
ವಿಡಿಯೋ ಪ್ರಕರಣ: ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣನ ಬಗ್ಗೆ ಬಿಗ್ ಅಪ್ಡೇಟ್
ವಿಡಿಯೋ ಪ್ರಕರಣ: ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣನ ಬಗ್ಗೆ ಬಿಗ್ ಅಪ್ಡೇಟ್
ಮಗುವಿನ ಕತ್ತು ಹಿಸುಕಿ ಮನ ಬಂದಂತೆ ಥಳಿಸಿದ ತಾಯಿ; ವಿಡಿಯೋ ವೈರಲ್​
ಮಗುವಿನ ಕತ್ತು ಹಿಸುಕಿ ಮನ ಬಂದಂತೆ ಥಳಿಸಿದ ತಾಯಿ; ವಿಡಿಯೋ ವೈರಲ್​
ನಾಗರಹೊಳೆ ಅಭಯಾರಣ್ಯಕ್ಕೆ ಬಂತು ಜೀವ ಕಳೆ, ಪ್ರಾಣಿಗಳ ಬಿಂದಾಸ್ ಓಡಾಟ ವಿಡಿಯೋ
ನಾಗರಹೊಳೆ ಅಭಯಾರಣ್ಯಕ್ಕೆ ಬಂತು ಜೀವ ಕಳೆ, ಪ್ರಾಣಿಗಳ ಬಿಂದಾಸ್ ಓಡಾಟ ವಿಡಿಯೋ
ಚಿಕ್ಕಮಗಳೂರು: ತಡರಾತ್ರಿವರೆಗೂ ಕಾದು ನೀರು ತುಂಬಿಸಿಕೊಳ್ಳುವ ಸ್ಥಿತಿ
ಚಿಕ್ಕಮಗಳೂರು: ತಡರಾತ್ರಿವರೆಗೂ ಕಾದು ನೀರು ತುಂಬಿಸಿಕೊಳ್ಳುವ ಸ್ಥಿತಿ
ತುಮಕೂರು: ಹಂಡೆಯೊಳಗಿದ್ದ ನಾಗರಹಾವು ರಕ್ಷಣ, ನಿಟ್ಟುಸಿರುಬಿಟ್ಟ ಮನೆಯವರು
ತುಮಕೂರು: ಹಂಡೆಯೊಳಗಿದ್ದ ನಾಗರಹಾವು ರಕ್ಷಣ, ನಿಟ್ಟುಸಿರುಬಿಟ್ಟ ಮನೆಯವರು
ರಿಲಯನ್ಸ್ ಜಿಯೋ ನಂಬರ್​ಗೆ ಪೋರ್ಟ್ ಮಾಡೋದು ಹೇಗೆ?
ರಿಲಯನ್ಸ್ ಜಿಯೋ ನಂಬರ್​ಗೆ ಪೋರ್ಟ್ ಮಾಡೋದು ಹೇಗೆ?
Daily Devotional: ದಕ್ಷಿಣ ದಿಕ್ಕಿಗೆ ಅಂಗಡಿ ಬಾಗಿಲಿದ್ದರೆ ಹೀಗೆ ಮಾಡಿ
Daily Devotional: ದಕ್ಷಿಣ ದಿಕ್ಕಿಗೆ ಅಂಗಡಿ ಬಾಗಿಲಿದ್ದರೆ ಹೀಗೆ ಮಾಡಿ
Weekly Horoscope: ವಾರ ಭವಿಷ್ಯ, ಮೇ 13ರಿಂದ ಮೇ 19ರ ತನಕದ ರಾಶಿ ಭವಿಷ್ಯ
Weekly Horoscope: ವಾರ ಭವಿಷ್ಯ, ಮೇ 13ರಿಂದ ಮೇ 19ರ ತನಕದ ರಾಶಿ ಭವಿಷ್ಯ